ರುಕ್ಮಿಣಿ ವಸಂತ್ ಒಬ್ಬ ಭಾರತೀಯ ನಟಿ , ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕನ್ನಡ ಚಲನಚಿತ್ರ ಬೀರಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. == ಜೀವನ == ರುಕ್ಮಿಣಿ ವಸಂತ್ ಅವರು 1994ರ ಡಿಸೆಂಬರ್ 10ರಂದು ಕರ್ನಾಟಕದ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಕರ್ನಲ್ ವಸಂತ್ ವೇಣುಗೋಪಾಲರು ಭಾರತದ ಶಾಂತಿಕಾಲದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪಡೆದ ಮೊದಲ ವ್ಯಕ್ತಿ ಆಗಿದ್ದಾರೆ. ರುಕ್ಮಿಣಿ ಲಂಡನ್ನ ಬ್ಲೂಮ್ಸ್ಬರಿ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್ನಲ್ಲಿ ನಟನಾ ಪದವಿಯನ್ನು ಪಡೆದಿದ್ದಾರೆ. == ವೃತ್ತಿಜೀವನ == ಎಂ. ಜಿ. ಶ್ರೀನಿವಾಸ ಅವರೊಂದಿಗೆ ಕನ್ನಡ ಚಲನಚಿತ್ರ ಬೀರಬಲ್ ಮೂಲಕ ಪಾದಾರ್ಪಣೆ ಮಾಡಿದರು. == ಚಲನಚಿತ್ರಗಳ ಪಟ್ಟಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರುಕ್ಮಿಣಿ ವಸಂತ್ @ ಐ ಎಮ್ ಡಿ ಬಿ